ಇಡುಕುಂಗಬ್ಬ
ಇಮ್ಮಡಿ ನಾಗವರ್ಮನ (ಸು. 1150) ಕಾವ್ಯಾವಲೋಕನದಲ್ಲಿ ಉಕ್ತವಾಗಿರುವ ಒಂದು ಕಾವ್ಯಜಾತಿ. ಇಡುಕುಂಗಬ್ಬಂ ಮುಕ್ತಕ ಮೊಡಂಬಡಲ್ ನೆಗ?-ಎಂದು 240ನೆಯ ಸೂತ್ರದಲ್ಲಿ ನಾಗವರ್ಮ ಪ್ರಸ್ತಾಪಿಸಿದ್ದಾನೆ. ಸಂಸ್ಕøತದ ಮುಕ್ತಕಕ್ಕೆ ಸಂವಾದಿಯಾದದ್ದು ಕನ್ನಡದ ಇಡುಕುಂಗಬ್ಬ. ಇಡುಕು ಎಂದರೆ ಸ್ವತಂತ್ರ, ವಿಮುಕ್ತ ಎಂದರ್ಥ. ಆದ್ದರಿಂದ ಇಡುಕುಂಗಬ್ಬವೆಂಬುದು ಬಿಡಿಯಾದ. ಸ್ವಯಂಪೂರ್ಣಪದ್ಯ.										
(ಸಿ.ಪಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ